ಪ್ರಬಂಧವನ್ನು ಬಂಡಾರ ಪ್ರಕಾಶನದ ಜಾಲತಾಣದಲ್ಲಿ ಏರು (ಅಪ್ಲೋಡು) ಮಾಡಬೇಕು. ವೆಬ್ಸಯಿಟ್ ಲಿಂಕ್ ಅನ್ನು ಕೆಲವು ದಿನಗಳಲ್ಲಿ ಹಂಚಿಕೊಳ್ಳಲಾಗುವುದು. ಪ್ರಬಂಧವು ಇಡಿಯಾಗಿ ಒಂದು ಪಿಡಿಎಫ್ ಕಡತದಲ್ಲಿ ಇರಬೇಕು. ಪ್ರಬಂಧದಲ್ಲಿ ಸಂಶೋಧಕರ ಹೆಸರು, ಹುದ್ದೆ, ಸಂಸ್ಥೆ, ಸಂಪರ್ಕ ಮೊದಲಾದ ಯಾವುದೆ ಮಾಹಿತಿ ಇಲ್ಲವೆ ಮಾಹಿತಿ ಸೂಚಕಗಳನ್ನು ಕೊಡಬಾರದು. ಸಂಧೋಕರ ಹೆಸರು, ಹುದ್ದೆ, ಸಂಸ್ಥೆ ಮೊದಲಾದ ಮಾಹಿತಿಗಳನ್ನು ಮತ್ತು ಸಂಪರ್ಕ ಮಾಹಿತಿಯನ್ನು ಜಾಲತಾಣದಲ್ಲಿ ಪ್ರತ್ಯೇಕವಾಗಿ ಕೊಡಬೇಕು.
ಪ್ರಬಂಧ ಕಳಿಸುವಾಗ ಈ ಕೆಳಗಿನ ಶೈಲಿಯನ್ನು ಪ್ರಬಂಧದಲ್ಲಿ ಅನುಸರಿಸಿ
ಸಂಶೋಧಕರ ಹೆಸರು: ಪ್ರಬಂಧದಲ್ಲಿ ಉಲ್ಲೇಖಿಸುವ ಸಂಶೋಧಕರ ಹೆಸರುಗಳನ್ನು ಈ ಕೆಳಗಿನಂತೆ ಕೊಡಬೇಕು
ಪ್ರಬಂಧದಲ್ಲಿ ಬರವಣಿಗೆ ನಡುವೆ ಸಣ್ರೂಪದಲ್ಲಿ ಅಡಿಟಿಪ್ಪಣಿಗಳನ್ನು ಕೊಡಬೇಕು. ಇದರಲ್ಲಿ ಲೇಖಕರ ಹೆಸರನ್ನು
ಉಲ್ಲೇಖಿಸಿದ್ದರೆ ಮೊದಲಿಗೆ ಆ ಪುಸ್ತಕ/ಲೇಖನ ಪ್ರಕಟವಾದ ವರುಷವನ್ನು ಮತ್ತು ನಂತರ ಎತ್ತಿಹೇಳಿದ ಪುಟಸಂಕೆಯನ್ನು
ಬರೆಯಬೇಕು: ಗಾಯಿಯವರು ಪ್ಹ್ ಬೆಳವಣಿಗೆಯನ್ನು ತೋರಿಸಿದ್ದಾರೆ (1942.36). ಲೇಖಕರ ಹೆಸರನ್ನು
ಬರವಣಿಗೆಯಲ್ಲಿ ತಂದಿಲ್ಲದಿದ್ದರೆ ಮೊದಲು ಲೇಖಕರ ಹೆಸರನ್ನು (ಲೇಖಕರ ಎರಡನೆ ಹೆಸರು), ಪ್ರಕಟಣೆ ವರುಷ ಮತ್ತು
ಪುಟಸಂಕೆಯನ್ನು ಅನುಕ್ರಮದಲ್ಲಿ ಕೊಡಬೇಕು (ಗಾಯಿ.1942.36).
ಆಕರಗ್ರಂಥಗಳು: ಈ ಕೆಳಗಿನಂತೆ ಅನುಕ್ರಮದಲ್ಲಿ ಆಕರ ಗ್ರಂಥಗಳನ್ನು ಕೊಡಬೇಕು.
ಪ್ರಬಂಧವನ್ನು ನುಡಿ ಇಲ್ಲವೆ ಯುನಿಕೋಡ್ ಬಳಸಿ ಬರೆದಿರಬೇಕು.